ರೂಮಿ ದರ್ವಾಜ಼ಾ (ಹಿಂದಿ: रूमी दरवाज़ा ಕೆಲವೊಮ್ಮೆ ಟರ್ಕಿಷ್ ಗೇಟ್ ಎಂದು ಕರೆಯಲ್ಪಡುತ್ತದೆ) ಭಾರತದ ಉತ್ತರ ಪ್ರದೇಶ ರಾಜ್ಯದ ಲಕ್ನೋದಲ್ಲಿರುವ ಒಂದು ಭವ್ಯವಾದ ಹೆಬ್ಬಾಗಿಲು. ಇದನ್ನು ನವಾಬ್ ಅಸಫ಼್ - ಉದ್ - ದೌಲಾನ ಆಶ್ರಯದಲ್ಲಿ ೧೭೮೪ರಲ್ಲಿ ನಿರ್ಮಿಸಲಾಯಿತು. ಇದು ಅವಧಿ ವಾಸ್ತುಕಲೆಯ ಉದಾಹರಣೆಯಾಗಿದೆ. ಅರವತ್ತು ಅಡಿ ಎತ್ತರವಿರುವ ರೂಮಿ ದರ್ವಾಜ಼ಾವನ್ನು ಇಸ್ತಾಂಬುಲ್‍ನಲ್ಲಿರುವ ಬಾಬಿ ಹುಮಾಯ್ಞೂ ಕಟ್ಟಡವನ್ನು ಆಧರಿಸಿ ರಚಿಸಲಾಗಿದೆ. ಇದು ಲಕ್ನೋದಲ್ಲಿನ ಅಸಫ಼ಿ ಇಮಾಮ್‍ಬಾಡಾದ ಪಕ್ಕದಲ್ಲಿದೆ ಮತ್ತು ಲಕ್ನೋ ನಗರದ ಲಾಂಛನವಾಗಿಬಿಟ್ಟಿದೆ. ಇದು ಹಳೆ ಲಕ್ನೋ ನಗರದ ಪ್ರವೇಶದ್ವಾರವನ್ನು ಗುರುತಿಸುತ್ತಿತ್ತು. ಆದರೆ ನವಾಬರ ನಗರಿಯು ಬೆಳೆದು ವಿಸ್ತರಿಸಿದಂತೆ, ಇದನ್ನು ನಂತರ ಒಂದು ಅರಮನೆಯ ಪ್ರವೇಶದ್ವಾರವಾಗಿ ಬಳಸಲಾಯಿತು. ಈ ಅರಮನೆಯನ್ನು ನಂತರ ಬ್ರಿಟಿಷ್ ದಂಗೆಕೋರರು ನಾಶಪಡಿಸಿದರು. == ಛಾಯಾಂಕಣ == == ಉಲ್ಲೇಖಗಳು == == ಹೊರಗಿನ ಕೊಂಡಿಗಳು == & 2014-02-02 ವೇಬ್ಯಾಕ್ ಮೆಷಿನ್ ನಲ್ಲಿ.